16th May 2026

ಬೈಲಹೊಂಗಲ, ಮೇ.16: ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆನಿಗೋಳ ಗ್ರಾಮದಲ್ಲಿ ಕುಡಿಯುವ ನೀರಿನ ನಳದ ನೀರು ಹಿಡಿಯುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ಪೊಲೀಸರ ಕರ್ತವ್ಯಲೋಪ ಹಾಗೂ ಅಕ್ರಮ ಕಸ್ಟಡಿ ಆರೋಪಗಳು ಕೇಳಿಬಂದಿವೆ.
ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ.13ರ ಮಧ್ಯರಾತ್ರಿ ರಾಮವ್ವ ಎಂಬ ಮಹಿಳೆ, ಆಕೆಯ ಪತಿ ಬಸವರಾಜ ಹಾಗೂ ಮಗ ಪ್ರದೀಪನನ್ನು ಬೈಲಹೊಂಗಲ ಪೊಲೀಸರು ಬಂಧಿಸಿ ಠಾಣೆಗೆ ಕರೆತಂದಿದ್ದರು. ಆದರೆ, ಆರೋಪಿಗಳ ಕುಟುಂಬದವರು ಹಾಗೂ ಸಾಮಾಜಿಕ ಹೋರಾಟಗಾರರ ಆರೋಪದ ಪ್ರಕಾರ, ಬಸವರಾಜ್ ಮತ್ತು ಪ್ರದೀಪ್ ನನ್ನು ದಿನಾಂಕ 14 ರಂದು ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು, ಬಂಧಿತ ಮಹಿಳೆಯನ್ನು ಮೇ.15ರ ಮಧ್ಯಾಹ್ನದವರೆಗೆ ಕಾನೂನುಬಾಹಿರವಾಗಿ ಪೊಲೀಸ್ ಠಾಣೆಯಲ್ಲೇ ಇರಿಸಿಕೊಂಡು, ಬಳಿಕ ಸುಳ್ಳು ಮಾಹಿತಿ ನೀಡಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಯತ್ನಿಸಿದ್ದಾರೆ ಎನ್ನಲಾಗಿದೆ.
ನ್ಯಾಯಾಲಯದಲ್ಲಿ ಹಾಜರಾದ ವೇಳೆ ರಾಮವ್ವ ಅವರು ನ್ಯಾಯಾಧೀಶರ ಮುಂದೆ ಮೇ.13ರಂದು ಬಂಧಿಸಿ ಮೇ.15ರವರೆಗೆ ಠಾಣೆಯಲ್ಲಿ ಇರಿಸಿಕೊಂಡಿದ್ದ ಬಗ್ಗೆ ಮಾಹಿತಿ ನೀಡಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಲಿಖಿತ ವರದಿ ಸಲ್ಲಿಸುವಂತೆ ಸೂಚಿಸಿದ್ದು, ಮೇ.12ರಿಂದ 15ರವರೆಗೆ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಜರುಪಡಿಸಲು ಆದೇಶಿಸಿದರು.
ಮೇ.16ರಂದು ಪೊಲೀಸರು ಸಿಸಿಟಿವಿ ಪುಟೇಜ್ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರಲ್ಲಿ ಮೇ.13ರ ಮಧ್ಯರಾತ್ರಿ ರಾಮವ್ವ, ಆಕೆಯ ಪತಿ ಮತ್ತು ಮಗನನ್ನು ಠಾಣೆಗೆ ಕರೆತಂದು, ನಂತರ ಸಿಸಿಟಿವಿ ವ್ಯಾಪ್ತಿಗೆ ಬಾರದ ಹಿಂಭಾಗದ ಪ್ರದೇಶಕ್ಕೆ ಕರೆದೊಯ್ಯುತ್ತಿರುವುದು ಕಂಡುಬಂದಿದೆ ಎಂದು ತಿಳಿದುಬಂದಿದೆ.
ಈ ಕುರಿತು ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ಹಾಗೂ ಸಾಮಾಜಿಕ ಹೋರಾಟಗಾರ ರಫೀಕ ಬಡೇಘರ್ ಪ್ರತಿಕ್ರಿಯಿಸಿ, “ಪೊಲೀಸ್ ಅಧಿಕಾರಿಗಳು ಬಡ ಜನರ ಮೇಲೆ ಅನ್ಯಾಯ ಮಾಡಬಾರದು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿ
ದರು.
ಬೈಲಹೊಂಗಲ, ಮೇ.16: ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆನಿಗೋಳ ಗ್ರಾಮದಲ್ಲಿ ಕುಡಿಯುವ ನೀರಿನ ನಳದ ನೀರು ಹಿಡಿಯುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ಪೊಲೀಸರ ಕರ್ತವ್ಯಲೋಪ ಹಾಗೂ ಅಕ್ರಮ ಕಸ್ಟಡಿ ಆರೋಪಗಳು ಕೇಳಿಬಂದಿವೆ.
ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ.13ರ ಮಧ್ಯರಾತ್ರಿ ರಾಮವ್ವ ಎಂಬ ಮಹಿಳೆ, ಆಕೆಯ ಪತಿ ಬಸವರಾಜ ಹಾಗೂ ಮಗ ಪ್ರದೀಪನನ್ನು ಬೈಲಹೊಂಗಲ ಪೊಲೀಸರು ಬಂಧಿಸಿ ಠಾಣೆಗೆ ಕರೆತಂದಿದ್ದರು. ಆದರೆ, ಆರೋಪಿಗಳ ಕುಟುಂಬದವರು ಹಾಗೂ ಸಾಮಾಜಿಕ ಹೋರಾಟಗಾರರ ಆರೋಪದ ಪ್ರಕಾರ, ಬಸವರಾಜ್ ಮತ್ತು ಪ್ರದೀಪ್ ನನ್ನು ದಿನಾಂಕ 14 ರಂದು ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು, ಬಂಧಿತ ಮಹಿಳೆಯನ್ನು ಮೇ.15ರ ಮಧ್ಯಾಹ್ನದವರೆಗೆ ಕಾನೂನುಬಾಹಿರವಾಗಿ ಪೊಲೀಸ್ ಠಾಣೆಯಲ್ಲೇ ಇರಿಸಿಕೊಂಡು, ಬಳಿಕ ಸುಳ್ಳು ಮಾಹಿತಿ ನೀಡಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಯತ್ನಿಸಿದ್ದಾರೆ ಎನ್ನಲಾಗಿದೆ.
ನ್ಯಾಯಾಲಯದಲ್ಲಿ ಹಾಜರಾದ ವೇಳೆ ರಾಮವ್ವ ಅವರು ನ್ಯಾಯಾಧೀಶರ ಮುಂದೆ ಮೇ.13ರಂದು ಬಂಧಿಸಿ ಮೇ.15ರವರೆಗೆ ಠಾಣೆಯಲ್ಲಿ ಇರಿಸಿಕೊಂಡಿದ್ದ ಬಗ್ಗೆ ಮಾಹಿತಿ ನೀಡಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಲಿಖಿತ ವರದಿ ಸಲ್ಲಿಸುವಂತೆ ಸೂಚಿಸಿದ್ದು, ಮೇ.12ರಿಂದ 15ರವರೆಗೆ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಜರುಪಡಿಸಲು ಆದೇಶಿಸಿದರು.
ಮೇ.16ರಂದು ಪೊಲೀಸರು ಸಿಸಿಟಿವಿ ಪುಟೇಜ್ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರಲ್ಲಿ ಮೇ.13ರ ಮಧ್ಯರಾತ್ರಿ ರಾಮವ್ವ, ಆಕೆಯ ಪತಿ ಮತ್ತು ಮಗನನ್ನು ಠಾಣೆಗೆ ಕರೆತಂದು, ನಂತರ ಸಿಸಿಟಿವಿ ವ್ಯಾಪ್ತಿಗೆ ಬಾರದ ಹಿಂಭಾಗದ ಪ್ರದೇಶಕ್ಕೆ ಕರೆದೊಯ್ಯುತ್ತಿರುವುದು ಕಂಡುಬಂದಿದೆ ಎಂದು ತಿಳಿದುಬಂದಿದೆ.
ಈ ಕುರಿತು ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ಹಾಗೂ ಸಾಮಾಜಿಕ ಹೋರಾಟಗಾರ ರಫೀಕ ಬಡೇಘರ್ ಪ್ರತಿಕ್ರಿಯಿಸಿ, “ಪೊಲೀಸ್ ಅಧಿಕಾರಿಗಳು ಬಡ ಜನರ ಮೇಲೆ ಅನ್ಯಾಯ ಮಾಡಬಾರದು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.